ಪರಿಚಯ

ಕ್ರಿಸ್ತನ ಒಬ್ಬ ಹಿಂಬಾಲಕನಾಗಿರುವದೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳುವಂತೆ ಹಾಗೂ ಅದರಲ್ಲಿ ಬೆಳೆಯುವಂತೆ ನಿಮಗೆ ಸಹಾಯ ಮಾಡುವದಕ್ಕೆ ಪ್ರಥಮ ಹೆಜ್ಜೆಗಳು (ಪರ್ಸ್ಟ್ ಸ್ಟೇಪ್ಸ್) ಒಂದು ಸಂಪನ್ಮೂಲವಾಗಿದೆ. ಕ್ರಿಸ್ತನನ್ನು ಹಿಂಬಾಲಿಸುವದೆಂದರೆ ಏನೆಂಬುದರ ಕುರಿತು ಕೆಲವು ಮೂಲಭೂತ ತತ್ವಗಳನ್ನು ಒಟ್ಟಾಗಿ ಕಂಡು ಹಿಡಿದುಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ಹಾಗೂ ಆತನನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಂತೆ ಈ ವ್ಯಾಸಂಗಾವಧಿಗಳು ನಮಗೆ ಸಹಾಯ ಮಾಡುವವು.

ಹಿಂದಿನದಲ್ಲಿ ನೆನಪಿಸಿಕೊಳ್ಳಿರಿ
  • ಈ ವಾರಕ್ಕಾಗಿ ನೀವು ಯಾವ ವಿಷಯಗಳಲ್ಲಿ ಕೃತಜ್ಞತೆಯುಳ್ಳವರಾ ಗಿರುವಿರಿ?
  • ನಿಮಗೆ ಯಾವದರ ವಿಷಯದಲ್ಲಿ ಹೋರಾಟವಿರುತ್ತದೆ ಮತ್ತು ನಾವು ಹೇಗೆ ಸಹಾಯ ಮಾಡಬಲ್ಲೆವು?
  • ನಿಮ್ಮ ಸಮುದಾಯ/ಕಾಲೇಜು/ಶಾಲೆಯಲ್ಲಿ ಯಾವ ಅಗತ್ಯತೆಗಳನ್ನು ಗಮನಿಸಿರುವಿರಿ?

ಈ ಅಗತ್ಯತೆಗಳ ವಿಷಯವಾಗಿ ಬೇರೆಯವರೊಂದಿಗೆ ಪ್ರಾರ್ಥಿಸುವದು ಒಳ್ಳೇದು.

ಹುಡುಕಿ ನೋಡಿರಿ

ಅಂಶ 1: ದೇವರು ನಿನ್ನನ್ನು ಪ್ರೀತಿಸುತ್ತಾನೆ ಮತ್ತು ತನ್ನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಬೇಕೆಂದು ನಿನ್ನನ್ನು ಸೃಷ್ಟಿಸಿದ್ದಾನೆ.

ಅಂಶ 2:  ನಮ್ಮ ಪಾಪದಿಂದಾಗಿ ನಾವು ದೇವರಿಂದ ಬೇರ್ಪಟ್ಟಿರುತ್ತೇವೆ, ಆದ್ದರಿಂದ ಆತನನ್ನು ತಿಳಿಯುವದಕ್ಕೆ ಅಥವಾ ಆತನ ಪ್ರೀತಿಯನ್ನು ಅನುಭವಿಸುವದಕ್ಕೆ ಸಾಧ್ಯವಿಲ್ಲ

ಅಂಶ 3: ನಮ್ಮ ಪಾಪಕ್ಕೆ ಯೇಸು ಮಾತ್ರವೇ ದೇವರು ನೀಡುವ ಏಕೈಕ ಪರಿಹಾರ. ಆತನ ಮೂಲಕ ಮಾತ್ರವೇ ದೇವರನ್ನು ತಿಳಿಯಬಲ್ಲೆವು ಮತ್ತು ಆತನ ಪ್ರೀತಿ ಹಾಗೂ ಕ್ಷಮಾಪಣೆಗಳನ್ನು ಅನುಭವಿಸಬಲ್ಲೆವು.

ಅಂಶ 4: ನಮ್ಮ ರಕ್ಷಕನೂ ಕರ್ತನೂ ಎಂದು ನಮ್ಮ ವಿಶ್ವಾಸವನ್ನು ಆತನಲ್ಲಿಡುವ ಮೂಲಕ ನಾವೊಬ್ಬೊಬ್ಬರು ಪ್ರತಿಸ್ಪಂದಿಸಬೇಕು. ಆಗ ಮಾತ್ರವೇ ನಾವು ದೇವರನ್ನು ವೈಯಕ್ತಿಕವಾಗಿ ತಿಳಿಯಬಲ್ಲೆವು.

ನನ್ನ ಸಾಕ್ಷಿ

  • ಯೇಸುವನ್ನು ಸಂಧಿಸುವದಕ್ಕೆ ಮುಂಚೆ ನನ್ನ ಜೀವನ
  • ನಾನು ಯೇಸುವನ್ನು ಹೇಗೆ ಭೇಟಿಯಾದೆನು
  • ಯೇಸುವನ್ನು ಭೇಟಿ ಆದಂದಿನಿಂದ ನನ್ನ ಜೀವನ ಹೇಗೆ ಬದಲಾಗಿದೆ
ಮುಂದಕ್ಕೆ ನಿರೀಕ್ಷಿಸಿರಿ

ಬಹಳ ಪ್ರಾಮುಖ್ಯವಾದ ಸಂಗತಿಯೆಂದರೆ ನಾವು ಕಲಿತಿರುವದನ್ನು ಹೇಗೆ ಅನ್ವಯಿಸಿಕೊಳ್ಳುವೆವು ಎಂಬದೇ, ಆದ್ದರಿಂದ ಅದನ್ನು ಮಾಡುವ ಹಾಗೆ ನಾವು ಒಬ್ಬರಿಗೊಬ್ಬರು ಸಹಾಯ ಮಾಡಲಿಚ್ಛಿಸುತ್ತೇವೆ. ಅದನ್ನು ಮಾಡುವಂತೆ ನಮಗೆ ಸಹಾಯವಾಗುವ ಕೆಲವು ಪ್ರಶ್ನೆಗಳು:

ಮುದ್ರಣ ರೂಪರೇಖೆಯನ್ನು ಡೌನ್ಲೋಡ್